Teachers Day

Teacher’s DAY


teachersday

ನಗರದ ಶ್ರೀ ರಮೇಶ ಸರ್ ಮತ್ತು ಸುರೇಶ ಸರ್ ರವರ ಶ್ರೀ ಮಾತೆ ಮಾಣಿಕೇಶ್ವರಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚಾರಣೆ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.ವಿದ್ಯಾರ್ಥಿಗಳಿಂದ ಏಲ್ಲಾ ಶಿಕ್ಷಕರಿಗೆ ಆರತಿ ಬೆಳಗುವುದರ ಮೂಲಕ ಗೌರವ ಸಲ್ಲಿಸಲಾಯಿತು.ಈ ಸಂಧರ್ಭದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಪತರ್ಕರ್ತರಾದ ಶ್ರೀ ಸದಾನಂದ ಜೋಶಿಯವರು ಮಾತಾನಾಡುತ್ತಾ  ಶಿಕ್ಷಕರಿಗೆ ವಿದ್ಯಾರ್ಥಿಗಳು ಸನಾತನ ಧರ್ಮದ ಸಂಸ್ಕ್ರತಿಯಂತೆ ಆರತಿ ಬೆಳಗಿ ಗೌರವ ಸಲ್ಲಿಸಿರುವುದು ಬಹಳ ಹೆಮ್ಮೇಯ ವಿಷಯವಾಗಿದೆ ಈ ರೀತಿ ಪಾಠದ ಜೊತೆ ಜೊತೆಗೆನೆ ವಿವಿಧ ರಿತೀಯ ಸಾಂಸ್ಕ್ರತಿಕ ಚಟುವಟಿಗಳು ನಡೆಯುತ್ತಿರಬೇಕು ಇವು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುತ್ತವೆ ಎಂದರು.

ಈ ಸಂಧರ್ಬದಲ್ಲಿ ಸಂಸ್ಥೆಯ ಅದ್ಯಕ್ಷರಾದ ಶ್ರೀ ರಮೇಶ ಕುಲಕರ್ಣಿಯವರು ಮಾತನಾಡುತ್ತಾ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳನೆ ಮಹತ್ವದ್ದಾಗಿದೆ, ಶಿಕ್ಷಕರಾದವರು ತನ್ನ ವೃತ್ತಿಯನ್ನು ಅಪಾರವಾಗಿ ಗೌರವಿಸಬೇಕು ಓರ್ವ ಶಿಲ್ಪಿಯಾಗಿ ಸರಿಯಾದ ಮೂರ್ತಿಯನ್ನು ಕೆತ್ತನೆ ಮಾಡಿ ರಾಷ್ಟ್ರ ಸೇವೆಗೆ ಸಮರ್ಪಿಸಬೇಕು,ತಾನು ಮಾಡುವ ವೃತ್ತಿಗೆ ನಿಜವಾದ ನ್ಯಾಯವನ್ನು ಒದಗಿಸಿಕೊಡಬೇಕು ಎಂದರು. ಮತ್ತು ಎಲ್ಲಾ ವಿದ್ಯಾರ್ಥಿಗಳು ಜೀವನದುದ್ದಕ್ಕು ತನಗೆ ಮಾರ್ಗದರ್ಶನ ಮಾಡಿದ ಗುರುಗಳಿಗೆ ಗೌರವವನ್ನು ಸಲ್ಲಿಸಬೇಕು,ಮುಂದೆ ನಿಮ್ಮ ಜೀವನದಲ್ಲಿ ನೀವು ಸಲ್ಲಿಸುವ ಗೌರವನೆ ಶಿಕ್ಷಕರಿಗೆ ನೀಡುವ ಗುರುಕಾಣಿಕೆಯಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಸೇರಿ ತಮ್ಮ ತರಗತಿಗಳನ್ನು ಅಲಂಕರಿಸಿದ್ದರು, ಶಿಕ್ಷಕರಿಗೆ ಸಸಿಯನ್ನು ನೆನಪಿನ ಕಾಣಿಕೆಯಾಗಿ ನಿಡಿದ್ದು ಅವಿಸ್ಮರಣಿಯವಾದದ್ದು. ಈ ಸಂದರ್ಭದಲ್ಲಿ ಪ್ರಾಚಾಂiÀರ್iರು,ಆಡಳಿತಾಧಿಕಾರಿಗಳು,ಶಿಕ್ಷಕರು ಸೇರಿದಂತೆ ಪ್ರಥಮ ಹಾಗೂ ದೀತಿಯ ಪಿ.ಯು.ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರುಪಣೆಯನ್ನು ವಿದ್ಯಾರ್ಥಿಗಳಾದ ಸೌಂದರ್ಯ ಶೇಟಕಾರ, ಎಂ.ಪಿ ಕಣ್ಮಣಿ ನಿರುಪಿಸಿದರು,ಮುಬಿನಾ ಬೇಗಂ ವಂದಿಸಿದರು.

 


 

 

Leave A Reply

Your email address will not be published. Required fields are marked *