Valmiki Jayanti

VALMIKI JAYANTI

ನಗರದ ಶ್ರೀ ಮಾತೆ ಮಾಣಿಕೇಶ್ವರಿ ಕಾಲೇಜಿನಲ್ಲಿ ಜೀವನದಲ್ಲಿ ಯಶಸ್ಸು ಸಾಧಿಸುವುದು ಹೇಗೆ ಎಂಬ ವಿಷಯದ ಮೇಲೆ ನಡೆದ ವಿಶೇಷ ಉಪನ್ಯಾಸದಲ್ಲಿ ಶ್ರೀಮತಿ ಲೀಲಾ ಕಾರಟಗಿಯವರು ಮಾತನಾಡುತ್ತಾ ಇವತ್ತಿನ ಆಧುನಿಕ ಹಾಗೂ ಸ್ಪರ್ದಾತ್ಮಕ ಯುಗದಲ್ಲಿ ಯಶಸ್ಸು ಎನ್ನುವುದು ಸುಲಭವಾಗಿ ದೊರಕುವಂತದಲ್ಲ ಅಥವಾ ಖರಿದಿಗೋ ಸಿಗುವಂತದಲ್ಲ ನಿರಂತರ ಅವಿರತ ಪರಿಶ್ರಮವಿದ್ದಲ್ಲಿ ಮಾತ್ರ ಯಶಸ್ಸು ಸಿಗುತ್ತದೆ ಎಂದರು.

valmikijayanti2ವಿಶೇಶವಾಗಿ ಯುವಶಕ್ತಿ ಮತ್ತು ವಿದ್ಯಾರ್ಥಿ ಜೀವನದಲ್ಲಿ ಸಮಯಕ್ಕೆ ಮಹತ್ವ ನೀಡಿ ಮುಂದುವರಿದಿದ್ದೆ ಆದಲ್ಲಿ ಅದರಲ್ಲು ಜೀವನದಲ್ಲಿ ಈ ಮೂರು ಅಂಶಗಳನ್ನು ತಾವಿರುವ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ, ಆತ್ಮವಿಶ್ವಾಸ, ಮತ್ತು ವೃತ್ತಿಗೌರವ ಈ ಮೇಲಿನ ಮೂರು ಅಂಶಗಳನ್ನು ಅಳವಡಿಸಿಕೊಂಡಿದ್ದೆ ಆದರೆ ಯಶಸ್ಸು ಎನ್ನುವುದು ಕಟ್ಟಿಟ್ಟ ಬುತ್ತಿ. ಈ ಸಮಯದಲ್ಲಿ ಯಾವುದೆ ರೀತಿಯ ಆಕರ್ಷಣೆಗಳಿಗೆ ಒಳಗಾಗದೆನೆ ತನ್ನ ಕಾಯಕದಲ್ಲಿ ಶೃದ್ದೆಯಿಂದ ಗೌರವಯುತವಾಗಿ ಬದುಕಿದರೆ ಮುಂಬರವ ದಿನಗಳಲ್ಲಿ ಸಮಾಜದ ಹಿತದ ದೃಷ್ಟಿಯಿಂದ ಒಳ್ಲೆಯ ಕೆಲಸ ಮಾಡಿದರೆ ಜನ ನಮ್ಮನ್ನು ಗೌರವಿಸುತ್ತಾರೆ ಮತ್ತು ಇವೆಲ್ಲವುಗಳ ಜೊತೆಗೆ ಮನುಷ್ಯನಾಗಿ ಜನಿಸಿದ ಮೇಲೆ ಸಾಮಾಜಿಕ ಮೌಲ್ಯಗಳಿನ್ನು ಗೌರವಿಸಬೇಕು ಎಂದರು.
valmikijayanti1ಮುಖ್ಯ ಅತಿಥಿಯಾಗಿ ಡಾ.ವಿಷ್ಣು ಸೇನಾ ಸಮಿತಿಯ ರಾಜ್ಯದ್ಯಕ್ಷರಾದ ವೀರಕಪುತ್ರ ಶ್ರೀನಿವಾಸರವರು ಮಾತನಾಡುತ್ತಾ ಬಡತನ ಎನ್ನುವುದು ಮನುಷ್ಯನಗೆ ಮನುಷ್ಯ ಬಹಳ ದೊಡ್ಡ ಪಾಠ ಕಲಿಸುತ್ತದೆ,ಇದು ಕಲಿಸಿದಷ್ಟು ಪಾಠ ಬೇರಾವ ವಿಶ್ವವಿದ್ಯಾಲಯಗಳು ಕಲಿಸಿಕೊಡುವುದಿಲ್ಲ, ಬಡತನದ ಬೇಗೆಯಲ್ಲಿ ಬೇಳೆದವರೆ ಅಜರಾಮರವಾಗಿ ಉಳಿಯುತ್ತಾರೆ ಹಾಗೂ ತಾನೇಷ್ಟೇ ಎತ್ತರಕ್ಕೆ ಬೇಳೆದರೂ ತಾನೂ ಬೇಳೆದು ಬಂದಿರುವ ದಾರಿಯನ್ನು ಮರೆಯಬಾರದು, ಮಾನವೀಯತೆ ಮತ್ತು ಹೃದಯ ವೈಶಾಲ್ಯತೆ ಹೊಂದಿರಬೇಕು,ಇಂದಿನ ಕಾಲದಲ್ಲಿ ಎಷ್ಟೆ ಎತ್ತರಕ್ಕೆ ಬಳೇದರೂ ಅಹಂಕಾರ ಬರಬಾರದು ಒಂದು ವೇಳೆ ಅಹಂಕಾರವೆನ್ನುವುದು ಬಂದ್ದಿದ್ದೆ ಆದಲ್ಲಿ ಅದು ಮನುಷ್ಯನ ಅಸ್ತಿತ್ವವೇ ಇಲ್ಲದಂತೆ ಮಾಡುತ್ತದೆ ಎಂದರು ಸಮಾಜಲ್ಲಿ ಎಲ್ಲರನ್ನು ಗೌರವಯುತವಾಗಿ ಕಾಣಬೇಕು ಎಂದರು.
ಅತಿಥಿಯಾಗಿ ಆಗಮಿಸಿದ ರೇವಣಸಿದ್ದಪ್ಪಾ ಜಲಾದೆಯವರು ಮಾತನಾಡುತ್ತಾ ವಿಕಾಸ ಅಕಾಡೆಮಿಯ ಅಡಿಯಲ್ಲಿ ಈ ರೀತಿಯ ಉಪನುಯಾಸ ಕಾರ್ಯಕ್ರಮಗಳು ಜಿಲ್ಲೆಯಾದ್ಯಂತ ಹಮ್ಮಿಕೋಂಡ್ಡಿದ್ದವೆ, ನಾವು ಹಿಂದುಳಿದವರು ಎಂಬ ಭ್ರಮೆ ಹೋಗಬೇಕು ಬರುವ ದಿನಗಳಲ್ಲಿ ಈ ಭಾಗವನ್ನು ಹೈದ್ರಬಾದ್ ಕರ್ನಾಟಕ ಎನ್ನಬಾರದು “ಕಲ್ಯಾಣ ಕರ್ನಾಟಕ” ಎನ್ನಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅದ್ಯಕ್ಷರಾದ ಶ್ರೀ ರಮೇಶ ಕುಲಕರ್ಣಿ ಯವರು ಮಾತನಾಡುತ್ತಾ ಈ ರೀತಿಯ ಉಪನ್ಯಾಸಗಳು ಇಂದಿನ ಯುವಕರಿಗೆ ಬಹಳ ಅತ್ಯವಶ್ಯಕ ಇವು ಮನುಷ್ಯನಿಗೆ ಜೀವನದ ಮೌಲ್ಯಗಳ ಮಹತ್ವವು ಕಲಿಸಿಕೊಡುತ್ತವೆ ಎಂದರು. ಆಡಳಿತಾಧಿಕಾರಿ ಗುರುನಾಥ ರಾಜಗೀರಾ ಹಾಗು ಉಪನ್ಯಾಸಕರು ,ವಿದ್ಯಾರ್ಥಿಗಳು ಇದ್ದರು.


 

Leave A Reply

Your email address will not be published. Required fields are marked *